ಮರವೆ ತನ್ನ ಅಪ್ಪಿದ ಬಳ್ಳಿಯ ಕಡಿದಂತೆ
ಬಳ್ಳಿ ಬಾಗಿ ಸುಮವ ಒಲ್ಲೆ ಎಂದಂತೆ
ಸುಮವು ತಾನು ನೆನೆದ ಮುತ್ತಿನ ಹನಿಯ ಭಾರವೆಂದಂತೆ
ಹನಿಯು ಮಣ್ಣಿನ ಪರಿಮಳವ ಬೇಡವೆಂದಂತೆ
ಕೊಳಲು ರಾಗ ಬೇಡವೆಂದು ದೂರ ನಿಂತಂತೆ
ಮುಂಜಾನೆಯು ಮುನಿದು ಕತ್ತಲಲ್ಲಿ ಕುಳಿತಂತೆ
ಹಸಿದ ಮಗುವು ತಾಯಿಯ ಒಲ್ಲೆ ಅಂದೀತೆ?
ನಿನಗೆ ನಾ ಬೇಡವೆಂದು ಮುನಿದರೆ ಹೇಗೆ?
ದೀಪವು ನಿನ್ನದೇ ಗಾಳಿಯು ನಿನ್ನದೇ
ಮನವು ನಿನ್ನದೇ ಮುನಿಸು ನಿನ್ನದೇ
ನೆನಪು ನಿನ್ನದೇ ನುಡಿದ ಪದಗಳು ನಿನ್ನದೇ
ಅಳುವು ನಿನ್ನದೇ ಅಳಿಸುವುದು ಹೇಗೆ ನಿನ್ನನೆ? ಅಳಿಯಲೆ ನನ್ನನೇ?
- ಗುಬಚ್ಚಿ
Beautiful.....Change the title to something original....I suggest dont use the existing song lines...Keep it pristinely original
ReplyDeletewrite some more words......
ReplyDelete