Gubbachiya Inchara

Gubbachiya Inchara

Friday, June 17, 2011

ನಿನಗೆ ಮುಡಿಪು ಈ ಹೂವು


ಮನ ತೊದಲಿತು ಹೊಸದಾಗಿ ಹಳೆ ಹೆಸರೊಂದ 
ತನು ಒದರಿತು ಹಸಿಯಾದ ಆ ಹಳೆ ವಿರಹದ ನೋವಿಂದ 
ಬಳಲಿತು ತನು ಮನವು ಮಿಲನದ ಆಸೆಯಿಂದ 
ಬಯಸಿತು ಬಿಡುಗಡೆ  ಸಂಸಾರ ಧಿಗ್ಬಂದದಿಂದ
  

ಅರಿಯದೆ ಸರಿಯಿತು ಮನ ಹರಿಯತ್ತ
ಸಿಲುಕದೆ ನುಡಿಯಿತು ಹರಿ ನಾಮ ಚಿತ್ತ
ಅಳುಕದೆ ನಡೆಯಿತು ತನು ಮನ ನಿನ್ನತ್ತ



ತೊಡಕುಗಳ ಭಾವಿಸದೆ,
ಶಂಕೆಗಳ ಛೆದಿಸದೆ,
ಕತ್ತಲಲ್ಲೂ ತೊಡಕದೆ,
ಬೆಳಕಲ್ಲು ಮರೆಯದೆ,
ನಿನ್ನೆಡೆಗೆ ಧಾವಿಸಿತು ಹೆಜ್ಜೆ ಒಂದೊಂದೇ



ತಿಳಿಯದೀ ತಳಮಳ ಮತ್ತಾರಿಗೂ ಪ್ರಿಯತಮ
ತಡೆಯದಿರಿ ನನ್ನ ಹೃದಯದ ಈ ಸರಿಗಮ
ಹೊರಟೆ ನಾ ನಿನ್ನೆಡೆಗೆ ಆಗಲಿ ಸುದರ್ಶನ ನಿಗಮ
ತಪಿಸಿದ ಮನದ, ಆರಾದ್ಯ ದೇವನ, ಸುಸಂಗಮ

ಬಡತನದಿ ಎಡವಿದೆ ಶಿಲೆ ಒಂದನ್ನು
ಮಣ್ಣಾದ ಶಿರವ ಭಾಗಿಸುವೆ ಮನ್ನಿಸೆನ್ನನ್ನು
ಸುರಿಸಿದೆ ನೀ ವರುಣನನು ತೊಲಗಿತು ಕಲೆ ಇನ್ನು


ಹೊಮ್ಬಿಸಲ ತೊಟ್ಟು, ಸಂಸಾರ ಸಾಗರವ ಮೆಟ್ಟು,
ಭಕ್ತಿ ಎಂಬ ಸಿಹಿಯೊಂದ, ಪ್ರೀತಿಯಿಂದ ಉಪಕರಿಸಿ,
ಸಲ್ಲಿಸಲು ತಂದಿರುವೆ ಬೆಂದ ಮನದಲ್ಲಿ,
ಒಲ್ಲೆ ಎನ ಬೇಡ ಬಳಲುತಿರುವೆ ನಾನ್ನಿಲ್ಲಿ
ಕರೆದೊಯ್ಯಿ ನನ್ನನ್ನು ನಿನ್ನ ಜೊತೆಯಲ್ಲಿ




ಶಪಿಸಲಾಗದು ಯಾರನ್ನು ಮುರಳಿ ನಂದನದಲ್ಲಿ
ಬಯಸಲಾಗದು ಎನನ್ನು ನಿನ್ನ ಸನಿಹದಲ್ಲಿ
ತಬ್ಬಿ ಕೇಳುವೆ ಇರಲಾರೆ ನಾನಿಲ್ಲಿ
ಕರೆದೊಯ್ಯಿ ನನ್ನನ್ನು ನಿನ್ನ ಜೊತೆ ವನಮಾಲಿ





No comments:

Post a Comment