Gubbachiya Inchara

Gubbachiya Inchara

Saturday, June 25, 2011

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ



ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ
ನಾ ತಾಳಲಾರೆ ವಿರಹ ಕೃಷ್ಣ
ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ


ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ...
ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ...ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೆ ಅದರ ರೀತಿ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ರೂಪ ತೋರೋ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ

ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ


Friday, June 24, 2011

ಎಲ್ಲ ಮರೆತಿರುವಾಗ - ನಿಸ್ಸಾರ್ ಅಹ್ಮೆದ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆ ಕ್ಷಣವನ್ನೇ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ
ಬಿರದ ತುಟಿಗಳ ತುಂಬು ನಗೆಯ ಕಾರಣವನ್ನೇ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ

ಸತ್ತ ಭುತವನ್ನೆತ್ತಿ ಹದ್ದಿನಂದದಿ ತಂದು
ಎನ್ನ ಮನದಂಗಳದಿ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂತಿರುವೆ
ಬೆನ್ನಲ್ಲೇ ಹಿರಿಯದಿರು ಓ ಚೆನ್ನ ನೆನಪೇ

Friday, June 17, 2011

ನಿನಗೆ ಮುಡಿಪು ಈ ಹೂವು


ಮನ ತೊದಲಿತು ಹೊಸದಾಗಿ ಹಳೆ ಹೆಸರೊಂದ 
ತನು ಒದರಿತು ಹಸಿಯಾದ ಆ ಹಳೆ ವಿರಹದ ನೋವಿಂದ 
ಬಳಲಿತು ತನು ಮನವು ಮಿಲನದ ಆಸೆಯಿಂದ 
ಬಯಸಿತು ಬಿಡುಗಡೆ  ಸಂಸಾರ ಧಿಗ್ಬಂದದಿಂದ
  

ಅರಿಯದೆ ಸರಿಯಿತು ಮನ ಹರಿಯತ್ತ
ಸಿಲುಕದೆ ನುಡಿಯಿತು ಹರಿ ನಾಮ ಚಿತ್ತ
ಅಳುಕದೆ ನಡೆಯಿತು ತನು ಮನ ನಿನ್ನತ್ತ



ತೊಡಕುಗಳ ಭಾವಿಸದೆ,
ಶಂಕೆಗಳ ಛೆದಿಸದೆ,
ಕತ್ತಲಲ್ಲೂ ತೊಡಕದೆ,
ಬೆಳಕಲ್ಲು ಮರೆಯದೆ,
ನಿನ್ನೆಡೆಗೆ ಧಾವಿಸಿತು ಹೆಜ್ಜೆ ಒಂದೊಂದೇ



ತಿಳಿಯದೀ ತಳಮಳ ಮತ್ತಾರಿಗೂ ಪ್ರಿಯತಮ
ತಡೆಯದಿರಿ ನನ್ನ ಹೃದಯದ ಈ ಸರಿಗಮ
ಹೊರಟೆ ನಾ ನಿನ್ನೆಡೆಗೆ ಆಗಲಿ ಸುದರ್ಶನ ನಿಗಮ
ತಪಿಸಿದ ಮನದ, ಆರಾದ್ಯ ದೇವನ, ಸುಸಂಗಮ

ಬಡತನದಿ ಎಡವಿದೆ ಶಿಲೆ ಒಂದನ್ನು
ಮಣ್ಣಾದ ಶಿರವ ಭಾಗಿಸುವೆ ಮನ್ನಿಸೆನ್ನನ್ನು
ಸುರಿಸಿದೆ ನೀ ವರುಣನನು ತೊಲಗಿತು ಕಲೆ ಇನ್ನು


ಹೊಮ್ಬಿಸಲ ತೊಟ್ಟು, ಸಂಸಾರ ಸಾಗರವ ಮೆಟ್ಟು,
ಭಕ್ತಿ ಎಂಬ ಸಿಹಿಯೊಂದ, ಪ್ರೀತಿಯಿಂದ ಉಪಕರಿಸಿ,
ಸಲ್ಲಿಸಲು ತಂದಿರುವೆ ಬೆಂದ ಮನದಲ್ಲಿ,
ಒಲ್ಲೆ ಎನ ಬೇಡ ಬಳಲುತಿರುವೆ ನಾನ್ನಿಲ್ಲಿ
ಕರೆದೊಯ್ಯಿ ನನ್ನನ್ನು ನಿನ್ನ ಜೊತೆಯಲ್ಲಿ




ಶಪಿಸಲಾಗದು ಯಾರನ್ನು ಮುರಳಿ ನಂದನದಲ್ಲಿ
ಬಯಸಲಾಗದು ಎನನ್ನು ನಿನ್ನ ಸನಿಹದಲ್ಲಿ
ತಬ್ಬಿ ಕೇಳುವೆ ಇರಲಾರೆ ನಾನಿಲ್ಲಿ
ಕರೆದೊಯ್ಯಿ ನನ್ನನ್ನು ನಿನ್ನ ಜೊತೆ ವನಮಾಲಿ