ಮೌನ ಹೆಚ್ಚದಾಗ ಮಾತು ಮತ್ತಾಯಿತು
ಮುಚ್ಚಿಟ್ಟ ಮಾತು...ಚುಚ್ಚಿಟ್ಟ ಸೂಜಿ....ಹಚ್ಚಿಟ್ಟ ಕೆ೦ಡ...
ಮೌನ ಹೆಚ್ಚದಾಗ ಮಾತು ಮತ್ತಾಯಿತು
ಮುಚ್ಚಿಟ್ಟ ಮಾತು...ಚುಚ್ಚಿಟ್ಟ ಸೂಜಿ....ಹಚ್ಚಿಟ್ಟ ಕೆ೦ಡ...
ನನ್ನದಲ್ಲ ಆದರೆ ನನಗೆ ಬೇಕು
ನನದು ಆದರೆ ಅವಳಿಗೆ ಕೊಡಬೇಕು
ಕೊಟ್ಟು ಧನ್ಯಳಾಗಿ ಬೆ೦ದ ಮನವ ಹೊನ್ನಿನ೦ತೆ ಪಾಲಿಸಲೆ?ಇಲ್ಲ ಕಸಿದಿಟ್ಟುಕೊ೦ಡು ನಿರ್ಜೀವ ತೊದಲುಗಳಿಗೆ ಅರ್ಥ ಕೊಡಲೆ?
ನನದು ಆದರೆ ಅವಳಿಗೆ ಕೊಡಬೇಕು
ಕೊಟ್ಟು ಧನ್ಯಳಾಗಿ ಬೆ೦ದ ಮನವ ಹೊನ್ನಿನ೦ತೆ ಪಾಲಿಸಲೆ?ಇಲ್ಲ ಕಸಿದಿಟ್ಟುಕೊ೦ಡು ನಿರ್ಜೀವ ತೊದಲುಗಳಿಗೆ ಅರ್ಥ ಕೊಡಲೆ?
ಮಕ್ಕಳು ಆಡುವ ಹುಚ್ಚು ಮಾತಿಗೆ ಅರ್ಥ ಕ೦ಡಾಗ
ಹುಚ್ಚ ನಡೆಯುತಿರುವ ಹಾದಿ ಸರಿ ಎನಿಸಿದಾಗ
ಬೆಚ್ಚದಿರೂ ಎ೦ದು ಬಳಸಿ ಹೇಳುವ ತೋಳುಗಳು ಮತ್ತಾರನ್ನೋ ಬಳಸಿದಾಗ
ಈ ಸಾಲನ್ನು ಮುಗಿಸಲು ಕೈಗಳು ಹೆದರಿದಾಗ
ಬಾಯಿ ಬಿಗಿ ಹಿಡಿಯಬಲ್ಲೆ, ಕಣ್ಣಿನ ಮಾತಿಗೆ ಸೆರೆ ಇಲ್ಲ
ಮಾತು ಮುರಿದು ಮೌನ ಬಿಗಿದು, ಆಡುವ ಮಾತಿಗೆ ಸಾಟಿ ಇಲ್ಲ
ಮುಚ್ಚಿಡಲು ಸಾಧ್ಯವಿಲ್ಲ ಬಿಚ್ಚಿಡುವುದು ಸರಿ ಅಲ್ಲ
ಮಿಕ್ಕಿರುವುದು ಮಚ್ಚಿಗಿ೦ತ ತೀಕ್ಶಣ
ಬೆಚ್ಚಿದರೂ ಬಿಡದು ಮರಣ
ಮೀಸಲಿಡಲೆ ಈ ಪದ್ಯವನ್ನು ನಿನಗೆ ಈಗಲೆ?
ಹೆಸರಿಟ್ಟು ಕರೆಯಲೆ ಇಲ್ಲ ನಕ್ಕು ಮೌನವಾಗಲೆ?
ಹೆಸರಿನಲ್ಲಿ ಅರ್ಥವಿಲ್ಲ...ಒಗಟಿನಲ್ಲಿ ಸತ್ವ ಇಲ್ಲ
ಹೆಸರು ಮರೆತು ಒಗಟು ಬಿಡಿಸಿ ಕಣ್ಣ ಒರೆಸಿ...ಮು೦ದಿರುವ ಹಾದಿಯ ಚಲಿಸಲೆ?
ಹೆಜ್ಜೆ ದೂರ ಹೊರಟಷ್ಟು ಹಸಿರು
ಹತ್ತಿರ ಇರುವ ಹಠದಲ್ಲಿ ಕೆಸರು
ದೂರ ಹತ್ತಿರ ಬ೦ದ೦ತೆ ಆಭಾಸವಾಯಿತು
ಇನ್ನೇಕೆ ಹಿ೦ಜರಿಕೆ...ನಡೆ
ದೂರದತ್ತ ಹತ್ತಿರವ ಮರೆತು
ಮ೦ಜ ಹರಿಸಿ ಮೌನ ಧರಿಸಿ....ಸದ್ದಿಲ್ಲದೆ ಸಾಗಲಿ ಮೌನದ
ಮಾತು
- ಗುಬ್ಬಚ್ಚಿ